ಫೋಟೋಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಿ ಹಣ ಸಂಪಾದಿಸುವುದು ಹೇಗೆ?

How to Sell Photos On Online? : ಫೋಟೋಗಳನ್ನ ಮಾರಾಟ ಮಾಡೋದು ಹೇಗೆ ಅಂತ ತಿಳ್ಕೊಳ್ಳೋದು ನಿಮ್ಮ ಕ್ರಿಯಾಶೀಲ ಆಸಕ್ತಿಯನ್ನ ನಿಜವಾದ ಉದ್ಯಮವಾಗಿ ಬದಲಾಯಿಸೋ ಮೊದಲ ಹೆಜ್ಜೆಯಾಗಿರಬಹುದು. ನಿಮ್ಮ ಸ್ಥಾನವನ್ನ ಕಂಡುಕೊಳ್ಳೋದ್ರಿಂದ ಹಿಡಿದು ಗ್ರಾಹಕರು ನಿಮ್ಮ ಕೆಲಸವನ್ನ ಸುಲಭವಾಗಿ ಖರೀದಿಸೋ ಹಾಗೆ ಒಂದು ವೆಬ್‌ಸೈಟ್ ಅನ್ನ ನಿರ್ಮಿಸೋವರೆಗೆ ನೀವು ತಿಳ್ಕೋಬೇಕಾದ ಎಲ್ಲದರ ಬಗ್ಗೆ ಈ ಮಾರ್ಗದರ್ಶಿ ನಿಮಗೆ ದಾರಿ ತೋರಿಸುತ್ತೆ.

ಈ ಮಾರ್ಗದರ್ಶಿಯಲ್ಲಿ ನೀವು ಏನೇನು ಕಂಡುಕೊಳ್ತೀರಿ ಅಂದ್ರೆ ವೃತ್ತಿಪರ ಛಾಯಾಗ್ರಾಹಕರಿಗೆ, ಮೀಸಲಾದಂತ ಒಂದು ವೆಬ್‌ಸೈಟ್ ನಿಮ್ಮ ಗ್ಯಾಲರಿ ಹಾಗು ನಿಮ್ಮ ಅಂಗಡಿಯ ಮುಂಭಾಗ ಆಗಿರುತ್ತೆ. ಇದು ನಿಮ್ಮ ಕೆಲಸವನ್ನ ನೀವು ಬಯಸಿದ ರೀತಿಯಲ್ಲಿ ನಿಖರವಾಗಿ ಪ್ರಸ್ತುತಪಡಿಸೋದಕ್ಕೆ, ನಿಮ್ಮ ಗ್ರಾಹಕರ ಜೊತೆ ನೇರವಾದ ಸಂಬಂಧವನ್ನ ಬೆಳೆಸೋದಕ್ಕೆ ಮತ್ತು ಮೂರನೇ ವ್ಯಕ್ತಿಯ ಮಾರುಕಟ್ಟೆಗಳಿಗೆ ಕಮಿಷನ್‌ಗಳನ್ನ ಕಟ್ಟದೇನೇ ನಿಮ್ಮ ಮಾರಾಟದಿಂದ ಬರೋ ಲಾಭವನ್ನ ಉಳಿಸಿಕೊಳ್ಳೋದಕ್ಕೆ ನಿಮಗೆ ಅವಕಾಶ ಮಾಡಿಕೊಡುತ್ತೆ.

ನೀವು ಈಗ್ಲೇ ನಿಮ್ಮ ಕೌಶಲ್ಯಗಳನ್ನ ಬೆಳೆಸಿಕೊಂಡಿದ್ದೀರಿ ಹಾಗು ಈಗ ನಿಮ್ಮ ಪ್ರತಿಭೆಯನ್ನ ಪ್ರದರ್ಶಿಸೋ ಛಾಯಾಗ್ರಹಣದ ಉದ್ಯಮವನ್ನ ಕಟ್ಟೋ ಸಮಯ ಬಂದಿದೆ. ವೃತ್ತಿಪರ ವೆಬ್‌ಸೈಟ್ ಬಿಲ್ಡರ್‌ನಿಂದ ನೀವು ಒಂದೇ ಜಾಗದಲ್ಲಿ ಅದ್ಭುತವಾದಂತಹ ಛಾಯಾಗ್ರಹಣ ಪೋರ್ಟ್‌ಫೋಲಿಯೋ ಮತ್ತು ಆನ್‌ಲೈನ್ ಅಂಗಡಿಯನ್ನ ರಚಿಸಬಹುದು, ಇದು ನಿಮ್ಮ ಬ್ರ್ಯಾಂಡ್ ಮತ್ತು ನಿಮ್ಮ ಫೋಟೋ ಮಾರಾಟದ ಮೇಲೆ ನಿಮಗೆ ಸಂಪೂರ್ಣ ನಿಯಂತ್ರಣವನ್ನ ಕೊಡುತ್ತೆ.

How to Sell Photos On Online? : ನಿಮ್ಮ ಕ್ಯಾಮೆರಾ ರೋಲ್ ಅನ್ನ ಆದಾಯದ ಮೂಲವಾಗಿ ಬದಲಾಯಿಸೋದು ನೀವು ಅಂದುಕೊಂಡಿದ್ದಕ್ಕಿಂತ ತುಂಬಾನೇ ಸುಲಭ. ಈ ಹಂತಗಳನ್ನ ಅನುಸರಿಸೋದ್ರಿಂದ ವೃತ್ತಿಪರ ಛಾಯಾಗ್ರಹಣ ಉದ್ಯಮವನ್ನ ಸ್ಥಾಪಿಸೋದಕ್ಕೆ, ಗ್ರಾಹಕರನ್ನ ಆಕರ್ಷಿಸೋದಕ್ಕೆ ಮತ್ತು ಮಾರಾಟವನ್ನ ಶುರು ಮಾಡೋದಕ್ಕೆ ನಿಮಗೆ ಸಹಾಯ ಆಗುತ್ತೆ.

01. ನಿಮ್ಮ ಛಾಯಾಗ್ರಹಣದ ಸ್ಥಾನವನ್ನ ವಿವರಿಸಿ

ನೀವು ಆನ್‌ಲೈನ್‌ನಲ್ಲಿ ಮಾರಾಟ ಮಾಡೋಕೆ ಶುರು ಮಾಡೋಕು ಮುಂಚೆ ನಿಮ್ಮ ಕೆಲಸವನ್ನ ಯಾವುದು ಸ್ಪೆಷಲ್ ಮಾಡುತ್ತೆ ಅಂತ ತಿಳ್ಕೊಳ್ಳೋದು ಸಹಾಯ ಮಾಡುತ್ತೆ. ನೀವು ಉಸಿರುಗಟ್ಟಿಸುವ ಭೂದೃಶ್ಯಗಳು, ಹತ್ತಿರದ ಭಾವಚಿತ್ರಗಳು ಅಥವಾ ಕ್ರಿಯಾತ್ಮಕ ಬೀದಿ ಛಾಯಾಗ್ರಹಣಕ್ಕೆ ಆಕರ್ಷಿತರಾಗಿದ್ದೀರಾ? ನಿರ್ದಿಷ್ಟವಾದ ಕ್ಷೇತ್ರಗಳ ಮೇಲೆ ಗಮನ ಇಡೋದ್ರಿಂದ ನೀವು ಎದ್ದು ಕಾಣೋದಕ್ಕೆ ಮತ್ತು ನಿಮ್ಮ ಶೈಲಿಯನ್ನ ನಿಜವಾಗ್ಲೂ ಇಷ್ಟಪಡೋ ಪ್ರೇಕ್ಷಕರನ್ನ ಆಕರ್ಷಿಸೋದಕ್ಕೆ ಸಹಾಯ ಮಾಡುತ್ತೆ. ನೀವು ಯಾರ ಜೊತೆ ಮಾತಾಡ್ತಾ ಇದ್ದೀರಿ ಅಂತ ನಿಮಗೆ ಕರೆಕ್ಟಾಗಿ ಗೊತ್ತಿರೋದ್ರಿಂದ ಇದು ನಿಮ್ಮ ಮಾರ್ಕೆಟಿಂಗ್ ಅನ್ನ ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತೆ.

ನೀವು ಯಾವುದನ್ನ ಜಾಸ್ತಿ ಇಷ್ಟಪಡ್ತೀರಿ ಮತ್ತು ಯಾವುದನ್ನ ಚೆನ್ನಾಗಿ ಮಾಡ್ತೀರಿ ಅನ್ನೋದರ ಬಗ್ಗೆ ಯೋಚನೆ ಮಾಡಿ. ನಿಮ್ಮ ಆಯ್ಕೆಯು ಪ್ರಯಾಣ ಛಾಯಾಗ್ರಹಣದಷ್ಟು ದೊಡ್ಡದಾಗಿರಬಹುದು ಅಥವಾ ಕರಾವಳಿ ನಗರಗಳ ಕಪ್ಪು-ಬಿಳುಪು ಛಾಯಾಗ್ರಹಣದಷ್ಟು ನಿರ್ದಿಷ್ಟವಾಗಿರಬಹುದು. ನೀವು ಒಂದು ಸ್ಪಷ್ಟವಾದ ಗಮನವನ್ನ ಹೊಂದಿದ್ಮೇಲೆ ನಿಮ್ಮ ಆದರ್ಶ ಗ್ರಾಹಕರ ಜೊತೆ ನೇರವಾಗಿ ಮಾತಾಡೋ ಛಾಯಾಗ್ರಹಣದ ಪೋರ್ಟ್‌ಫೋಲಿಯೋ ಮತ್ತು ಬ್ರ್ಯಾಂಡ್ ಅನ್ನ ನೀವು ನಿರ್ಮಿಸಬಹುದು.

02. ಇಕಾಮರ್ಸ್ ವೆಬ್‌ಸೈಟ್ ಬಿಲ್ಡರ್ ಅನ್ನ ಆರಿಸಿ

ನಿಮ್ಮ ವೆಬ್‌ಸೈಟ್ ನಿಮ್ಮ ಸ್ವಂತ ಕಲಾ ಗ್ಯಾಲರಿ ಆಗಿರುತ್ತೆ ಮತ್ತು ನಿಮ್ಮ ಫೋಟೋಗಳು ನೋಡೋಕೆ ಚೆನ್ನಾಗಿ ಕಾಣೋ ಹಾಗೆ ಮಾಡೋದು ಮಾತ್ರ ಅಲ್ಲ ಅವುಗಳನ್ನ ಮಾರಾಟ ಮಾಡೋಕೂ ಸಹಾಯ ಮಾಡೋ ವೇದಿಕೆ ನಿಮಗೆ ಅವಶ್ಯಕತೆ ಇದೆ. ವೃತ್ತಿಪರ ಇ-ಕಾಮರ್ಸ್ ವೆಬ್‌ಸೈಟ್ ಬಿಲ್ಡರ್ ನಿಮಗೆ ಬೆರಗುಗೊಳಿಸುವ ಪೋರ್ಟ್‌ಫೋಲಿಯೊವನ್ನ ರಚಿಸೋದಕ್ಕೆ ಹಾಗು ಆನ್‌ಲೈನ್ ಅಂಗಡಿಯನ್ನ ನಡೆಸೋದಕ್ಕೆ ಬೇಕಾಗಿರೋ ಎಲ್ಲವನ್ನೂ ನೀಡುತ್ತೆ. ಛಾಯಾಗ್ರಾಹಕರಿಗಾಗಿ ಸ್ಪೆಷಲ್ ಆಗಿ ರಚಿಸಲಾದ ನೂರಾರು ಡಿಸೈನರ್-ನಿರ್ಮಿತ ವೆಬ್‌ಸೈಟ್ ಟೆಂಪ್ಲೇಟ್‌ಗಳಿಂದ ನೀವು ಆಯ್ಕೆ ಮಾಡಬಹುದು.

03. ಆನ್‌ಲೈನ್ ಛಾಯಾಗ್ರಹಣ ಪೋರ್ಟ್‌ಫೋಲಿಯೋವನ್ನು ನಿರ್ಮಿಸಿ.

ನಿಮ್ಮ ಪೋರ್ಟ್‌ಫೋಲಿಯೋ ವೆಬ್‌ಸೈಟ್ ನಿಮ್ಮ ವೆಬ್‌ಸೈಟ್‌ನ ಮುಖ್ಯ ಭಾಗ ಆಗಿರುತ್ತೆ. ಇದು ಬಲವಾದ ಮೊದಲ ನೋಟದಲ್ಲೇ ಆಕರ್ಷಣೆ ಮೂಡಿಸೋಕೆ ನಿಮಗೆ ಅವಕಾಶ, ಅದಕ್ಕೆ ನಿಮ್ಮ ಅತ್ಯುತ್ತಮ ಚಿತ್ರಗಳನ್ನ ಸಂಗ್ರಹಿಸೋದು ಮುಖ್ಯ ಆಗುತ್ತೆ.

ನಿಮ್ಮ ವಿಶಿಷ್ಟ ಶೈಲಿ, ತಾಂತ್ರಿಕ ಕೌಶಲ್ಯ ಹಾಗು ನೀವು ಆಯ್ಕೆ ಮಾಡಿದ ಸ್ಥಾನವನ್ನ ತೋರಿಸೋ ಫೋಟೋಗಳ ಆಯ್ಕೆಯನ್ನ ಆರಿಸಿ. ಇಲ್ಲಿ ಕ್ವಾಂಟಿಟಿಗಿಂತ ಕ್ವಾಲಿಟಿ ಮುಖ್ಯ ಆಗುತ್ತೆ, ಯಾಕಂದ್ರೆ ಅದ್ಭುತ ಶಾಟ್‌ಗಳ ಸಣ್ಣ ಸಂಗ್ರಹ ಸರಾಸರಿ ಷಾಟ್‌ಗಳ ದೊಡ್ಡ ಗ್ಯಾಲರಿಗಿಂತ ಹೆಚ್ಚು ಪವರ್‌ಫುಲ್ ಆಗಿರುತ್ತೆ.

ನಿಮ್ಮ ಪೋರ್ಟ್‌ಫೋಲಿಯೋವನ್ನ ತಾರ್ಕಿಕ ಗ್ಯಾಲರಿಗಳು ಅಥವಾ ಪ್ರಾಜೆಕ್ಟ್‌ಗಳಾಗಿ ವಿಂಗಡಿಸಿ. ಇದು ವೀಕ್ಷಕರಿಗೆ ನಿಮ್ಮ ಕೆಲಸವನ್ನ ತಿಳ್ಕೊಳ್ಳೋಕೆ ಮತ್ತು ಛಾಯಾಗ್ರಾಹಕರಾಗಿ ನಿಮ್ಮ ವ್ಯಾಪ್ತಿಯನ್ನ ಅರ್ಥಮಾಡಿಕೊಳ್ಳೋಕೆ ಸಹಾಯ ಮಾಡುತ್ತೆ . ನಿಮ್ಮ ಚಿತ್ರಗಳ ಮೇಲೆ ಗಮನ ಇಡೋ ಹಾಗೆ, ಅವು ಯಾವುದೇ ಗೊಂದಲ ಇಲ್ಲದೆ ಹೊಳೆಯೋತರಹ ಒಂದು ಕ್ಲೀನ್ ಆದ, ಮಾಡ್ರನ್ ಡಿಸೈನ್ ಅನ್ನ ಬಳಸಿ.

04. ನಿಮ್ಮ ಆನ್‌ಲೈನ್ ಅಂಗಡಿಯನ್ನ ಹೊಂದಿಸಿ

ನಿಮ್ಮ ಪೋರ್ಟ್‌ಫೋಲಿಯೋ ರೆಡಿ ಆದ್ಮೇಲೆ ಅದನ್ನ ಅಂಗಡಿಯಾಗಿ ಬದಲಾಯಿಸೋ ಸಮಯ. ನಿಮ್ಮ ಫೋಟೋಗಳನ್ನ ನೀವು ಹೇಗೆ ಮಾರಾಟ ಮಾಡೋಕೆ ಇಷ್ಟಪಡ್ತೀರಿ ಅಂತ ನಿರ್ಧಾರ ಮಾಡಿ. ನೀವು ಅವುಗಳನ್ನ ಡಿಜಿಟಲ್ ಡೌನ್‌ಲೋಡ್‌ಗಳಾಗಿ ನೀಡಬಹುದು, ಇದು ವೆಬ್‌ಸೈಟ್‌ಗಳು ಅಥವಾ ಮಾರ್ಕೆಟಿಂಗ್‌ಗಾಗಿ ಚಿತ್ರಗಳ ಅವಶ್ಯಕತೆ ಇರೋ ಗ್ರಾಹಕರಿಗೆ ಉತ್ತಮವಾಗಿರುತ್ತೆ. ಅಥವಾ ನೀವು ಅವುಗಳನ್ನ ಫಿಸಿಕಲ್ ಪ್ರಿಂಟ್ಸ್, ಕ್ಯಾನ್ವಾಸ್‌ಗಳು ಅಥವಾ ಇತರ ಪ್ರಾಡಕ್ಟ್ಸ್‌ಗಳಾಗಿ ಮಾರಾಟ ಮಾಡಬಹುದು.

05. ನಿಮ್ಮ ಫೋಟೋಗಳನ್ನ ಮಾರ್ಕೆಟಿಂಗ್ ಮಾಡಿ

ನಿಮ್ಮ ವೆಬ್‌ಸೈಟ್ ಲೈವ್ ಆಗಿ ಮತ್ತು ನಿಮ್ಮ ಅಂಗಡಿ ಓಪನ್ ಆದ್ಮೇಲೆ ನೀವು ಉದ್ಯಮದಲ್ಲಿದ್ದೀರಿ ಅಂತ ಜನರಿಗೆ ತಿಳಿಸಬೇಕು. ನಿಮ್ಮ ಸೋಶಿಯಲ್ ಮೀಡಿಯಾ ಚಾನೆಲ್‌ಗಳಲ್ಲಿ ನಿಮ್ಮ ವೆಬ್‌ಸೈಟ್ ಅನ್ನ ಹಂಚಿಕೊಳ್ಳೋದ್ರಿಂದ ಶುರು ಮಾಡಿ. Instagram ಮತ್ತು Pinterest ನಂತಹ ವೇದಿಕೆಗಳನ್ನ ಬಳಸಿ, ಅವು ಹೆಚ್ಚು ವಿಷುವಲ್ ಆಗಿದ್ದು ಛಾಯಾಗ್ರಾಹಕರಿಗೆ ಪರ್ಫೆಕ್ಟ್ ಆಗಿರುತ್ತೆ. ನಿಮ್ಮ ಅತ್ಯುತ್ತಮ ಕೆಲಸವನ್ನ ಪೋಸ್ಟ್ ಮಾಡಿ ಮತ್ತು ಯಾವಾಗಲೂ ನಿಮ್ಮ ಸೈಟ್‌ಗೆ ಒಂದು ಲಿಂಕ್ ಅನ್ನ ಸೇರಿಸಿ.

ನಿಮ್ಮ ಫೋಟೋಗಳ ಹಿಂದಿನ ಸ್ಟೋರಿಗಳನ್ನ ಹಂಚಿಕೊಳ್ಳೋಕೆ ಅಥವಾ ಛಾಯಾಗ್ರಹಣ ಸಲಹೆಗಳನ್ನ ನೀಡೋಕೆ ನಿಮ್ಮ ವೆಬ್‌ಸೈಟ್‌ನಲ್ಲಿ ಬ್ಲಾಗ್ ಅನ್ನ ಶುರು ಮಾಡೋದನ್ನ ಪರಿಗಣಿಸಿ. ಇದು ಸರ್ಚ್ ಇಂಜಿನ್‌ಗಳ ಮೂಲಕ ವಿಸಿಟರ್ಸ್ ಅನ್ನ ಆಕರ್ಷಿಸೋಕೆ ಮತ್ತು ನಿಮ್ಮನ್ನ ಎಕ್ಸ್‌ಪರ್ಟ್ ಅಂತ ತೋರಿಸೋದಕ್ಕೆ ಸಹಾಯ ಮಾಡುತ್ತೆ. ನೀವು ಫಾಲೋವರ್ಸ್ ಲಿಸ್ಟ್ ಅನ್ನ ನಿರ್ಮಿಸೋದಕ್ಕೆ ಮತ್ತು ನಿಮ್ಮ ಅಂಗಡಿಗೆ ಹೊಸ ಫೋಟೋಗಳನ್ನ ಸೇರಿಸಿದಾಗ ಅವರಿಗೆ ತಿಳಿಸೋದಕ್ಕೆ ಇಮೇಲ್ ಮಾರ್ಕೆಟಿಂಗ್ ಅನ್ನ ಸಹ ಯೂಸ್ ಮಾಡಬಹುದು.